ChatGPT Image Oct 3, 2026, 08_41_04 PM-modified
GREATER BENGALURU NEWS 9
Siddaramaiah

ರಾಮನಗರ: ರಾಜ್ಯದ ಜನರಿಗೆ ಮತ್ತೆ ಶಾಕ್ ಎನ್ನುವಂತೆ ಶೀಘ್ರವೇ ನಂದಿನಿ ಹಾಲಿನ ದರ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ. ಈ ಮೂಲಕ ಜನಸಾಮಾನ್ಯರಿಗೆ ಬಿಗ್ ಶಾಕ್ ನೀಡಿದ್ದಾರೆ.

 

ಇಂದು ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರೈತರಿಗೆ ಅನುಕೂಲವಾಗಲೆಂದು ನಂದಿನ ಹಾಲಿನ ದರವನ್ನು ಹೆಚ್ಚಳ ಮಾಡಲಾಗುತ್ತದೆ. ಇದು ನಿಮಗಾಗಿ ಸರ್ಕಾರ ಮಾಡುತ್ತಿರುವಂತ ಏರಿಕೆಯಾಗಿದೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ತಿಳಿಸಿದರು.

 

ನಂದಿನಿ ಹಾಲಿನ ದರ ಹೆಚ್ಚಳದ ಬಗ್ಗೆ ಕೆಎಂಎಫ್ ಜೊತೆಗೆ ಸಭೆ ನಡೆಸಲಾಗುತ್ತದೆ. ಆ ಸಭೆಯ ಬಳಿಕ ಹಾಲಿನ ದರ ಹೆಚ್ಚಳ ಮಾಡುವಂತ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ನೀವೆಲ್ಲ ನಮ್ಮ ಪರವಾಗಿದ್ದರೇ ಹಾಲಿನ ದರ ಹೆಚ್ಚಳ ಮಾಡಲಾಗುತ್ತದೆ ಎಂದರು.

 

ಸದ್ಯ ಹಾಲಿನ ದರ ಹೀಗಿದೆ ಹಾಲಿನ‌ ಹೊಸ ದರ ಹೇಗಿದೆ.?

ನೀಲಿ ಪ್ಯಾಕೆಟ್ 44

ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) 45

ಆರೆಂಜ್ ಪ್ಯಾಕೆಟ್ ಹಾಲು  48

ಆರೆಂಜ್ ಸ್ಪೆಷಲ್ ಹಾಲು 50

ಶುಭಂ ಹಾಲು  50

ಸಮೃದ್ದಿ ಹಾಲು 53

ಶುಭಂ (ಟೋನ್ಡ್ ಹಾಲು)  51

ಸಂತೃಪ್ತಿ ಹಾಲು 55 57

ಶುಭಂ ಗೋಲ್ಡ್ ಹಾಲು 51

ಶುಭಂ ಡಬಲ್ ಟೋನ್ಡ್ ಹಾಲು 43

Leave a Reply

Your email address will not be published. Required fields are marked *