ChatGPT Image Oct 3, 2026, 08_41_04 PM-modified
GREATER BENGALURU NEWS 9

ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆ ಪರಿಣಾಮ ವೀಕೆಂಡ್‌ನಲ್ಲಿಯೂ ಜನರು ಮೆಟ್ರೋದಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ.

ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ್ದರಿಂದ ಜನರು ಇದೀಗ ಸ್ವಂತ ವಾಹನ ಹಾಗೂ ಬಿಎಂಟಿಸಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ವೀಕೆಂಡ್‌ನಲ್ಲಿಯೂ ಮೆಟ್ರೋದಲ್ಲಿ ಪ್ರಯಾಣಿಕರು ಇಲ್ಲದೇ ಖಾಲಿ ಹೊಡೆಯುತ್ತಿವೆ.

ಈ ಮೊದಲು ವೀಕೆಂಡ್‌ನಲ್ಲಿ ಓರಿಯನ್ ಮಾಲ್, ಇಸ್ಕಾನ್ ಟೆಂಪಲ್‌ಗೆ ಬರುವ ಜನರು ಹೆಚ್ಚಾಗಿ ಮೆಟ್ರೋದಲ್ಲಿ ಬರುತ್ತಿದ್ದರು. ಆದರೆ ಇವತ್ತು ಮೆಟ್ರೋದಲ್ಲಿ ಪ್ರಯಾಣಿಕರಿಲ್ಲ. ಹೀಗಾಗಿ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದ ಬಳಿ ಪ್ರಯಾಣಿಕರೇ ಇಲ್ಲದಂತಾಗಿದ್ದು, ಮೆಟ್ರೋದಲ್ಲಿ ಪ್ರಯಾಣ ಮಾಡಲು ಜನರ ಹಿಂಜರಿಯುತ್ತಿದ್ದಾರೆ.

ಕಳೆದ ಭಾನುವಾರ ನಮ್ಮ ಮೆಟ್ರೋ ಟಿಕೆಟ್ ದರ 46% ಅಂದರೆ ಮೆಟ್ರೋ ಪ್ರಯಾಣ ದರ ಗರಿಷ್ಠ 90 ರೂ., (30. ಕಿ.ಮೀ) ಕನಿಷ್ಠ 10 ರೂ.ಗೆ (0-2 ಕಿ.ಮೀ) ಏರಿಕೆಯಾಗಿತ್ತು.

ಮೆಟ್ರೋ ದರ ಏರಿಕೆಯಿಂದ ಶುರುವಾಯ್ತು ಮತ್ತೊಂದು ಸಮಸ್ಯೆ: ನಗರದಲ್ಲಿ ಹೆಚ್ಚಾಯ್ತು ಟ್ರಾಫಿಕ್‌ ಜಾಮ್‌

Leave a Reply

Your email address will not be published. Required fields are marked *