ChatGPT Image Oct 3, 2026, 08_41_04 PM-modified
GREATER BENGALURU NEWS 9

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  2024-25ನೇ ಸಾಲಿನಲ್ಲಿ ಬರೋಬ್ಬರಿ 4,930 ಕೋಟಿ ರೂ. ಆಸ್ತಿ ತೆರಿಗೆ  ಸಂಗ್ರಹಿಸಿತ್ತು. ಇದು ಕಳೆದ ವರ್ಷಗಿಂತ ಸರಿಸುಮಾರು ಶೇ. 25 ರಷ್ಟು ಹೆಚ್ಚಳವಾಗಿದೆ. 2023-24ನೇ ಸಾಲಿನಲ್ಲಿ 3,918 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಇದೀಗ ಮುಂದಿನ ವರ್ಷದ ಅಂದರೆ 2025-26ನೇ ಸಾಲಿನ ಸಂಪೂರ್ಣ ಆಸ್ತಿ ತೆರಿಗೆ ಪಾವತಿಸಲು ಬಿಬಿಎಂಪಿ ಅವಕಾಶ ನೀಡಿದ್ದು, ಭರ್ಜರಿ ಆಫರ್ ಕೂಡ ನೀಡಿದೆ.

ಈ ಬಗ್ಗೆ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಬಿಎಂಪಿ, 2025-26ನೇ ಸಾಲಿನ ಸಂಪೂರ್ಣ ಆಸ್ತಿ ತೆರಿಗೆಯನ್ನು ಏಪ್ರಿಲ್​​ 30 ರೊಳಗೆ ಪಾವತಿಸಿ, ಶೇ. 5 ರಷ್ಟು ರಿಯಾಯಿತಿ ಪಡಿಯಿರಿ ಎಂದು ತಿಳಿಸಿದೆ. ಆ ಮೂಲಕ ಆಸ್ತಿ ತೆರಿಗೆದಾರರಿಗೆ ಬಿಬಿಎಂಪಿ ಗುಡ್​ ನ್ಯೂಸ್​ ನೀಡಿದೆ. ಬಿಬಿಎಂಪಿ 2025-26ನೇ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಆರು ಸಾವಿರ ಕೋಟಿ ರೂ ದಾಟುವ ಗುರಿ ಹೊಂದಿದೆ.

2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರೋಬ್ಬರಿ 4,930 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿತ್ತು. ಇದು 2023-24ರಲ್ಲಿ ಸಂಗ್ರಹವಾಗಿದ್ದ 3,918 ಕೋಟಿಗಿಂತ ಸರಿಸುಮಾರು ಶೇ.25 ರಷ್ಟು ಹೆಚ್ಚಳವಾಗಿತ್ತು. ಆ ಮೂಲಕ ಬಿಬಿಎಂಪಿ 2024-25ನೇ ಆರ್ಥಿಕ ವರ್ಷದಲ್ಲಿ ಶೇ.94 ರಷ್ಟು ಆದಾಯ ಗುರಿ ಸಾಧಿಸಿತ್ತು.

ಬಿಬಿಎಂಪಿಯ ಎಂಟು ವಲಯಗಳ ಪೈಕಿ, ಯಲಹಂಕ 464.66 ಕೋಟಿ ರೂ. ಸಂಗ್ರಹಿಸುವ ಮೂಲಕ ನಿಗದಿತ ಗುರಿಗಿಂತ 19 ಕೋಟಿ ರೂ. ಹೆಚ್ಚು ತೆರಿಗೆ ಸಂಗ್ರಹಿಸಿತ್ತು. ಅದೇ ರೀತಿಯಾಗಿ ಮಹದೇವಪುರ 1,310.58 ಕೋಟಿ ರೂ. ಸಂಗ್ರಹಿಸಿತ್ತು. ಆ ಮೂಲಕ ಯಲಹಂಕ ಮತ್ತು ಮಹದೇವಪುರ ಹೆಚ್ಚು ತೆರಿಗೆ ಸಂಗ್ರಹಿಸಿದ ವಲಯಗಳಾಗಿವೆ.

ಏ್ರಪಿಲ್​ 21ರಂದು ನಂಜಾವಧೂತ ಶ್ರೀಗಳ 46ನೇ ವರ್ಧಂತಿ ಮಹೋತ್ಸವ: ಸರ್ವರಿಗೂ ಆತ್ಮೀಯ ಸ್ವಾಗತ

Leave a Reply

Your email address will not be published. Required fields are marked *