ChatGPT Image Oct 3, 2026, 08_41_04 PM-modified
GREATER BENGALURU NEWS 9

ಬೆಂಗಳೂರು: ಸೆಲೆಬ್ರಿಟಿ ನಾಯಿ ತಳಿಗಾರ ಎಂದು ಖ್ಯಾತಿಗಳಿಸಿದ್ದ ಸತೀಶ್ ಮನೆ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತೀಶ್ ಕಳ್ಳಾಟದ ಒಂದೊಂದೇ ಸತ್ಯಗಳನ್ನು ಬಯಲು ಮಾಡುತ್ತಿದ್ದಾರೆ.

ಹೌದು.. ಸತೀಶ್ ಎಸ್ ಅವರ ಬೆಂಗಳೂರು ನಿವಾಸದ ಮೇಲೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು ಇಡೀ ಮನೆಯನ್ನು ಶೋಧಿಸಿ ಹಲವು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಸತೀಶ್ ತೋಳ ಮತ್ತು ಕಕೇಶಿಯನ್ ಶೆಫರ್ಡ್‌ನ ಅಪರೂಪದ ಮಿಶ್ರತಳಿ ಕ್ಯಾಡಬೊಮ್ಸ್ ಒಕಾಮಿ ಎಂಬ ತಳಿಯನ್ನು ಹೊಂದಿದ್ದಾರೆ ಎಂಬುದಕ್ಕೆ ಯಾವುದೇ ದಾಖಲೆ ಪುರಾವೆಗಳು ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿದ್ದು, ಈ ಸಂಬಂಧ ಇಡಿ ಆಧಿಕಾರಿಗಳ ದಾಳಿಯಲ್ಲಿ ಯಾವುದೇ ದಾಖಲೆಗಳೂ ದೊರೆತಿಲ್ಲ ಎನ್ನಲಾಗಿದೆ.

ಅಂತರರಾಷ್ಟ್ರೀಯ ಉಪಸ್ಥಿತಿಯನ್ನು ಹೊಂದಿರುವ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಹಲವಾರು ಮಾಧ್ಯಮ ಸಂಸ್ಥೆಗಳು ಸತೀಶ್ (51) ಮತ್ತು ಅಪರೂಪದ ತಳಿ ನಾಯಿಯ ಬಗ್ಗೆ ವರದಿ ಮಾಡಿದ್ದವು. ನಾಯಿಯನ್ನು ಅಮೆರಿಕದಲ್ಲಿ ಸಾಕಲಾಗಿದೆ ಎಂದು ಸತೀಶ್ ಸುದ್ದಿ ಸಂಸ್ಥೆಗಳಲ್ಲಿ ಒಂದಕ್ಕೆ ತಿಳಿಸಿದ್ದರು ಮತ್ತು ಅದನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಅವರು 50 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದೂ ಹೇಳಿದ್ದರು. ನಾಯಿಯೊಂದಿಗೆ ಸತೀಶ್ ಅವರ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್ ಆಗಿತ್ತು.

50 ಕೋಟಿ ಮೌಲ್ಯದ ನಾಯಿ: ಇಡಿ ಕೆಂಗಣ್ಣು
ನಾಯಿಯನ್ನು ಭಾರತಕ್ಕೆ ತರಲು 50 ಕೋಟಿ ರೂ ಖರ್ಚಾಗಿದೆ ಎಂಬ ಸತೀಶ್ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಇಡಿ ಅಧಿಕಾರಿಗಳು ಈ ಶೋಧ ನಡೆಸಿದ್ದು, ಇದು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಸಂಭವನೀಯ ಉಲ್ಲಂಘನೆಗಳನ್ನು ತನಿಖೆ ಮಾಡಲು ED ಯನ್ನು ಪ್ರೇರೇಪಿಸಿತು.

ಆದರೆ ಹಾಲಿ ದಾಳಿ ಮತ್ತು ಶೋಧ ಕಾರ್ಯಾಚರಣೆಯಲ್ಲಿ ED ಅಧಿಕಾರಿಗಳು “ಅಪರೂಪದ ತಳಿ”ಯ ಯಾವುದೇ ಕುರುಹುಗಳನ್ನು ಕಂಡುಕೊಂಡಿಲ್ಲ. ಅಲ್ಲದೆ ಸ್ವತಃ ಸತೀಶ್ ಕೂಡ ಆ ನಾಯಿ ತನ್ನದಲ್ಲ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ ಎನ್ನಲಾಗಿದೆ. ಸತೀಶ್ ಕೇವಲ ಛಾಯಾಚಿತ್ರಗಳಿಗೆ ಪೋಸ್ ನೀಡಿದ್ದಾರೆ ಎಂದು ವರದಿಯಾಗಿದೆ.

50 ಕೋಟಿ ಅಲ್ಲ.. 1 ಲಕ್ಷ ರೂ ಕೂಡ ಬೆಲೆ ಬಾಳಲ್ಲ
ಮೂಲಗಳ ಪ್ರಕಾರ, ಛಾಯಾಚಿತ್ರದಲ್ಲಿರುವ ನಾಯಿಯು ಬೇರೊಬ್ಬ ವ್ಯಕ್ತಿಯ ಒಡೆತನದ್ದಾಗಿದ್ದು, ಸತೀಶ್ ಹೇಳಿಕೊಂಡಂತೆ ಅದರ ಮೌಲ್ಯ 50 ಕೋಟಿ ರೂ.ಗಳಾಗಿರಲಿಲ್ಲ. ಇಡಿ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಸಹ ಪರಿಶೀಲಿಸಿದಾಗ 50 ಕೋಟಿ ರೂ.ಗಳ ವಹಿವಾಟಿನ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ನಾಯಿಯ ಮೌಲ್ಯ 1 ಲಕ್ಷ ರೂ ಕೂಡ ಇಲ್ಲ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿಯಾಗಿದೆ.

ರಸ್ತೆ ಗುಂಡಿ ಬಗ್ಗೆ ದೂರು ನೀಡಿದ್ರೆ ಅವರ ಎಕ್ಸ್ ಖಾತೆಯೇ ಬ್ಲಾಕ್: ಬಿಬಿಎಂಪಿ ನಡೆಗೆ ಸಾರ್ವಜನಿಕರ ಆಕ್ರೋಶ

Leave a Reply

Your email address will not be published. Required fields are marked *