ChatGPT Image Oct 3, 2026, 08_41_04 PM-modified
GREATER BENGALURU NEWS 9
Toll

ಬೆಂಗಳೂರು: ರಾಜ್ಯದಲ್ಲಿ ಜನಸಾಮಾನ್ಯರಿಗೆ ಒಂದಲ್ಲ ಒಂದು ದರ ಏರಿಕೆ ಶಾಕ್ ದಿನದಿಂದ ದಿನಕ್ಕೆ ಎದುರಾಗಿದೆ. ಇಂದು ಮಧ್ಯ ರಾತ್ರಿಯಿಂದ ವಾಹನ ಸವಾರರಿಗೆ ಟೋಲ್ ಶಾಕ್ ಎದುರಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ ಮೂಲಕ ಹಾಸನ ರಾಷ್ಟ್ರೀಯ ಹೆದ್ದಾರಿ 75 ರ ರಸ್ತೆಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ಸೆಪ್ಟೆಂಬರ್‌ 1 ರಿಂದ ದರ ಏರಿಕೆ ಮಾಡಿ ಶಾಕ್ ನೀಡಿದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI). ಈ ದರ ಏರಿಕೆ ಇಂದು ಮಧ್ಯ ರಾತ್ರಿ 12 ಗಂಟೆಯಿಂದ ಜಾರಿಗೆ ಬರಲಿದೆ. ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್ ಪ್ರೈವೇಟ್ ಲಿಮಿಟೆಡ್‌ ಟೋಲ್​ಗಳಲ್ಲಿ ಏರಿಕೆಯಾಗಿದೆ.

ನೆಲಮಂಗಲ ಹಾಸನ ರಾಷ್ಟ್ರೀಯ ಹೆದ್ದಾರಿಯ ಟೋಲ್​ಗಳಲ್ಲಿ ವಾಹನ ಸವಾರರಿಗೆ ಹೆಚ್ಚಿನ ಸುಂಕ ಹೊರೆ ಎದುರಾಗಿದೆ. ದೊಡ್ಡಕರೇನಹಳ್ಳಿ ಟೋಲ್ ಹಾಗೂ ಕಾರಬೈಲು ಟೋಲ್ ಪ್ಲಾಜಾಗಳಲ್ಲಿ ದರ ಏರಿಕೆಯಾಗಿದೆ. ಏಕ ಮುಖ ಸಂಚಾರಕ್ಕೆ 5 ರೂಪಾಯಿ, ದ್ವಿಮುಖ ಸಂಚಾರಕ್ಕೆ 10 ರೂಪಾಯಿ ದರ ಏರಿಕೆ ಮಾಡಲಾಗಿದೆ.

ಈಗ ಇರುವ ದರಗಳೆಂದರೆ, ಫಾಸ್​ಟ್ಯಾಗ್ ಇರುವ ಕಾರು, ಜೀಪು, ವ್ಯಾನ್ ಹಾಗೂ ಹಗುರ ವಾಹನಗಳಿಗೆ ಏಕಮುಖ ಸಂಚಾರಕ್ಕೆ 55 ರೂ ಇದೆ. ಇವತ್ತು ಮಧ್ಯರಾತ್ರಿಯಿಂದ ಇದರ ದರ 60 ರೂಗೆ ಏರಿಕೆ ಆಗುತ್ತದೆ. ದಿನದ ಸಂಚಾರವು 85 ರೂನಿಂದ 90 ರೂಗೆ ಏರಿಕೆ ಆಗುತ್ತಿದೆ. ಫಾಸ್​ಟ್ಯಾಗ್ ಇಲ್ಲದ ವಾಹನಗಳಿಗೆ ಏಕಮುಖ ಸಂಚಾರಕ್ಕೆ ಟೋಲ್ ದರ 110 ರೂನಿಂದ 120 ರೂಗೆ ಏರಿಕೆ ಆಗುತ್ತಿದೆ.

ಲೈಟ್ ಕಮರ್ಷಿಯಲ್ ವಾಹನ ಹಾಗೂ ಸರಕು ಸಾಗಣೆ ವಾಹನಗಳಾದರೆ ಏಕಮುಖ ಸಂಚಾರಕ್ಕೆ 100 ರೂ, ದಿನದ ಸಂಚಾರಕ್ಕೆ 155 ರೂ ಟೋಲ್ ಏರಿಸಲಾಗುತ್ತಿದೆ.

ಟೋಲ್ ದರ ಏರಿಕೆಗೆ ಸಾರ್ವಜನಿಕರ ಆಕ್ರೋಶ
ಹೆದ್ದಾರಿಯಲ್ಲಿ ಟೋಲ್ ದರಗಳನ್ನು ಏರಿಸುವುದರಿಂದ ವಾಹನ ಮಾಲೀಕರ ಜೇಬಿಗೆ ಕತ್ತರಿ ಬೀಳಲಿದೆ. ಸಾಗಣೆ ವೆಚ್ಚ ಇತ್ಯಾದಿಗಳು ಏರಿಕೆ ಆಗಲಿವೆ. ಇದರ ಪರಿಣಾಮ ಬೇರೆ ಬೇರೆ ಸ್ತರಗಳಲ್ಲೂ ಆಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಘು ವಾಣಿಜ್ಯ ಹಾಗೂ ಸರಕು ವಾಹನಗಳು ಈಗಿನ ದರ ಏಕಮುಖ 100 ಹಾಗೂ ದಿನದ ಸಂಚಾರ 155 ದರ ಏರಿಕೆಯಿಂದ ವಾಹನ ಮಾಲೀಕರ ಜೇಬಿಗೆ ಕತ್ತರಿ ಇದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಒಟ್ಟಾರೆ ರಾಜ್ಯದಲ್ಲಿ ಜನಸಾಮಾನ್ಯರು ಒಂದಲ್ಲ ಒಂದು ದರ ಏರಿಕೆಯಿಂದ ಪರಿತಪ್ಪಿಸುತ್ತಿದ್ದಾರೆ. ನೆಲಮಂಗಲ ಹಾಸನ ರಾಷ್ಟ್ರೀಯ ಹೆದ್ದಾರಿ 75 ರ ದರ ಏರಿಕೆಯಿಂದ ಈ ರಸ್ತೆಯಲ್ಲಿ ಸಂಚಾರ ಮಾಡುವ ಸವಾರರಿಗೆ ಟೋಲ್ ಶಾಕ್ ಎದುರಾಗಿದೆ.

Leave a Reply

Your email address will not be published. Required fields are marked *