ChatGPT Image Oct 3, 2026, 08_41_04 PM-modified
GREATER BENGALURU NEWS 9
GBA

Greater Bengaluru News9 : ದಶಕಗಳಿಂದ ಬೆಂಗಳೂರಿಗರು ಜನನ ಪ್ರಮಾಣಪತ್ರ, ಖಾತಾ, ವ್ಯಾಪಾರ ಪರವಾನಗಿ ಅಥವಾ ಕಟ್ಟಡ ಯೋಜನೆ ಅನುಮೋದನೆ ಪಡೆಯಲು ವಾರಗಟ್ಟಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆ(ಈ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)ಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಅಲ್ಲದೆ ವಿವಿಧ ಯೋಜನೆಗಳನ್ನು ಮಾಡಿಸಿಕೊಳ್ಳಲು ಅಥವಾ ಅರ್ಹತಾ ಪತ್ರವನ್ನು ಪಡೆದುಕೊಳ್ಳುವುದಕ್ಕೆ ದಲ್ಲಾಳಿಗಳಿಗೆ ಹಣ ಪಾವತಿಸಿ ಮಾಡಬೇಕಾದ ಅನಿವಾರ್ಯತೆಯೂ ಎದುರಾಗಿದೆ. ಕೆಲವು ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಕಾಲದಲ್ಲಿ ಕೆಲಸ ಮಾಡಿಕೊಡುತ್ತಿಲ್ಲ ಎನ್ನುವ ದೂರು ಸಹ ಇದೆ. ಇದೀಗ ಈ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಂಡುಕೊಳ್ಳುವುದಕ್ಕ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ.

ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ವಿವಿಧ ಸೇವೆಗಳಿಗೆ ನಿರ್ದಿಷ್ಟ ಮೊತ್ತವನ್ನು ಪಾವತಿ ಮಾಡುವ ಮೂಲಕ ಹಾಗೂ ಯಾವುದೇ ಸಮಸ್ಯೆಗಳು ಇಲ್ಲದೆ ಒಂದೇ ಸೂರಿನಲ್ಲಿ ಸೇವೆಗಳನ್ನು ನೀಡುವ ಸೇವೆಯನ್ನು ಪರಿಚಯಿಸುತ್ತಿದೆ. ಸಾರ್ವಜನಿಕರು ಇನ್ಮುಂದೆ ದೀರ್ಘ ಸರತಿ ಸಾಲುಗಳಲ್ಲಿ ಕಾಯದೆ 27 ಸೇವೆಗಳನ್ನು ಪಡೆಯಬಹುದು – ಎಲ್ಲವೂ ಒಂದೇ ಸೂರಿನಡಿ. ಇನ್ನು ಈ ಹೊಸ ಮಾದರಿಯು ಪಾಸ್‌ಪೋರ್ಟ್ ಸೇವಾ ಕೇಂದ್ರದ ಮಾದರಿಯಲ್ಲಿಯೇ ಇದೆ. ಬೆಂಗಳೂರಿನಾದ್ಯಂತ ಈ ಮಾದರಿಯ 10 ಸೌಲಭ್ಯಗಳನ್ನು ಸ್ಥಾಪಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಅಲ್ಲದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ತಲಾ ಎರಡು ಸೇವಾ ಕೇಂದ್ರಗಳನ್ನು ಪ್ರಾರಂಭಿಸುವುದಕ್ಕೆ ನಿರ್ಧರಿಸಲಾಗಿದೆ. ಈ ಸಂಬಂಧ DH ವರದಿ ಮಾಡಿದೆ.

ಬೆಂಗಳೂರು ಒನ್ ಕೇಂದ್ರಗಳಿಗಿಂತ ಹೇಗೆ ಭಿನ್ನ
ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಈಗಾಗಲೇ ಬೆಂಗಳೂರಿನಲ್ಲಿ ಇರುವ ಬೆಂಗಳೂರು ಒನ್ ಮಾದರಿಯ ಸೇವಾ ಕೇಂದ್ರಗಳನ್ನು ಪ್ರಾರಂಭಿಸುವುದಕ್ಕೆ ಮುಂದಾಗಿದೆಯಾದರೂ ಈ ಹೊಸ ಕೇಂದ್ರಗಳು ಬೆಂಗಳೂರು ಒನ್‌ಗಿಂತ ಭಿನ್ನವಾಗಿರಲಿವೆ ಎಂದು ಹೇಳಲಾಗಿದೆ. ಹೊಸ ಸೌಲಭ್ಯವು ಅಸ್ತಿತ್ವದಲ್ಲಿರುವ ಬೆಂಗಳೂರು ಒನ್ ಕೇಂದ್ರಗಳಿಗಿಂತ ಭಿನ್ನವಾಗಿರಲಿವೆ. ಅಲ್ಲದೆ ಎರಡನೆಯದಾಗಿ ಒಂದೇ ಸೂರಿನಡಿ ಈ ಹಲವು ಸೇವೆಗಳನ್ನು ಕಲ್ಪಿಸುವ ಸಾಧ್ಯತೆ ಇದೆ. ಜಿಬಿಎಯ ಅಧಿಕಾರಿಗಳನ್ನು ಈ ಕೇಂದ್ರಗಳಲ್ಲಿ ನಿಯೋಜಿಸಲಾಗುತ್ತದೆ. ಇದರಿಂದ ಫೈಲ್‌ಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಥವಾ ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆ ಕಚೇರಿಗಳಿಗೆ ಕಳುಹಿಸದೆ ಅಲ್ಲಿಯೇ ವಿಲೇವಾರಿ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ.

ಈ ಸೇವಾ ಕೇಂದ್ರಗಳ ಪ್ರಾರಂಭಕ್ಕೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಟೆಂಡರ್ ಆಹ್ವಾನಿಸಿದೆ. ಈ ಸೇವೆಯ ಅಡಿಯಲ್ಲಿ ಇ-ಖಾತಾವನ್ನು ಬಯಸುವವರು ಅದನ್ನು 1,000 ರೂಪಾಯಿ ಹೆಚ್ಚುವರಿ ಶುಲ್ಕಕ್ಕೆ ಪಡೆಯಬಹುದು. ಅದೇ ರೀತಿ, ಬಿ-ಖಾತಾವನ್ನು ಎ-ಖಾತಾ ಅಥವಾ ಕಟ್ಟಡದೊಂದಿಗೆ ಫ್ಲಾಟ್ ಅಥವಾ ಪ್ಲಾಟ್‌ಗಾಗಿ ಹೊಸ ಖಾತಾ ಆಗಿ ಪರಿವರ್ತಿಸಲು 2,500 ರೂಪಾಯಿ ವೆಚ್ಚವಾಗಬಹುದು. ಸಂಪೂರ್ಣ ಬಹುಮಹಡಿ ವಸತಿ ಯೋಜನೆಗೆ ಖಾತಾಗಳನ್ನು ಹುಡುಕುವ ಡೆವಲಪರ್‌ನಂತಹ ಬೃಹತ್ ವಹಿವಾಟುಗಳಿಗೆ, ಶುಲ್ಕವು ಪ್ರತಿ ಫ್ಲಾಟ್‌ಗೆ 1,500 ರೂಪಾಯಿ ಆಗುವ ಸಾಧ್ಯತೆ ಇದೆ.

ಅಧಿಕೃತವಾಗಿ, ಜಿಬಿಎ ಸಂಸ್ಥೆಯು ಇ-ಖಾತಾಗೆ 125 ರೂಪಾಯಿಒ ಮಾತ್ರ ವಿಧಿಸುತ್ತದೆ, ಆದರೆ ಎಲ್ಲರಿಗೂ ಈ ಸೇವೆ ಸಿಗುತ್ತಿಲ್ಲ. ಕೆಲವರು ಅನಿವಾರ್ಯವಾಗಿ 3,000 ರೂಪಾಯಿಯಿಂದ 60,000 ರೂಪಾಯಿ ವರೆಗೆ ಪಾವತಿ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಸೇವೆಗಳನ್ನು ಸುಗಮಗೊಳಿಸಲು ಪರಿಚಯಿಸಲಾಗುತ್ತಿರುವ ಹಲವಾರು ಸುಧಾರಣೆಗಳಲ್ಲಿ ‘ಸೇವಾ ಕೇಂದ್ರ’ವೂ ಒಂದು ಎಂದು ಜಿಬಿಎಯ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *