ChatGPT Image Oct 3, 2026, 08_41_04 PM-modified
GREATER BENGALURU NEWS 9
Mysuru Dasara

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮವು ಮತ್ತೊಮ್ಮೆ ಕಳೆಗಟ್ಟಲು ಸಜ್ಜಾಗಿದೆ. ನಾಡಹಬ್ಬದ ಅಂಗವಾಗಿ ಪ್ರಮುಖ ಕಾರ್ಯಕ್ರಮಗಳು ಮತ್ತು ದಿನಾಂಕಗಳ ವಿವರಗಳು ಇಲ್ಲಿವೆ.

ಯುವ ಸಂಭ್ರಮ: ಸೆಪ್ಟೆಂಬರ್ 28ರಿಂದ ಅಕ್ಟೋಬರ್ 5ರವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಓಪನ್ ಏರ್ ಥಿಯೇಟರ್ (ಮಾನಸ ಗಂಗೋತ್ರಿ ಬಯಲು ರಂಗಮಂದಿರ) ನಡೆಯಲಿದೆ. ಕಾರ್ಯಕ್ರಮವು ಪ್ರತಿದಿನ ಸಂಜೆ 5 ಗಂಟೆಗೆ ಶುರುವಾಗಲಿದ್ದು, ಎಲ್ಲರಿಗೂ ಉಚಿತ ಪ್ರವೇಶವಿರುತ್ತದೆ; ಆದರೆ ಮೊದಲ 10,000 ಜನರಿಗೆ ಮಾತ್ರ ಪ್ರವೇಶ ಅವಕಾಶವಿದೆ.

ಆಹಾರ ಮೇಳ: ಅಕ್ಟೋಬರ್ 11ರಿಂದ 25ರವರೆಗೆ ಮಹಾರಾಜ ಕಾಲೇಜು ಗ್ರೌಂಡ್‌ನಲ್ಲಿ ದಸರಾ ಆಹಾರ ಮೇಳ ಆಯೋಜಿಸಲಾಗಿದೆ.

ಕಂಬಳ (ಹೊಸ ಆಕರ್ಷಣೆ): ಈ ಬಾರಿಯ ದಸರಾದ ವಿಶೇಷ ಆಕರ್ಷಣೆಯಾಗಿ ಅಕ್ಟೋಬರ್ 18 ಮತ್ತು 19ರಂದು ಎರಡು ದಿನಗಳ ಕಾಲ ಸಾತಗಳ್ಳಿಯ ವಿಟಿಯು (VTU) ರೀಜನಲ್ ಸೆಂಟರ್ ಹತ್ತಿರ (ಹೊ} ಕಂಬಳ ಜರುಗಲಿದೆ.

ಆಯುಧ ಪೂಜೆ ಮತ್ತು ಟಾರ್ಚ್ ಲೈಟ್ ಪೇರೇಡ್: ಅಕ್ಟೋಬರ್ 20ರಂದು ಬೆಳಿಗ್ಗೆ ಆಯುಧ ಪೂಜೆ ನಡೆಯಲಿದ್ದು, ಅದೇ ದಿನ ಸಂಜೆ 7:00 ರಿಂದ 10:00 ರವರೆಗೆ ಬನ್ನಿಮಂಟಪದ ಪಂಜಿನ ಕರವಾಯು ಕಾರ್ಯಕ್ರಮವಿರುತ್ತದೆ.

ಜಂಬೂ ಸವಾರಿ: ಅಕ್ಟೋಬರ್ 21ರಂದು ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಭವ್ಯ ಜಂಬೂ ಸವಾರಿ ಜರುಗಲಿದೆ.

Leave a Reply

Your email address will not be published. Required fields are marked *