ChatGPT Image Oct 3, 2026, 08_41_04 PM-modified
GREATER BENGALURU NEWS 9
Dead Body Bill

Greater Bengaluru News9 : ಖಾಸಗಿ ಆಸ್ಪತ್ರೆಗಳ ಅಮಾನವೀಯ ಹಾಗೂ ಶೋಷಣೆಯ ವಸೂಲಿ ಧಂಧೆಗೆ ಶಾಶ್ವತವಾಗಿ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಚಿಕಿತ್ಸೆ ಫಲಕಾರಿಯಾಗದೆ ರೋಗಿ ಮೃತಪಟ್ಟ ಸಂದರ್ಭದಲ್ಲಿ, ಆಸ್ಪತ್ರೆಯ ಬಾಕಿ ಬಿಲ್ ಪಾವತಿಸುವವರೆಗೂ ಶವವನ್ನು ಬಿಡುಗಡೆ ಮಾಡದೆ ಕುಟುಂಬದವರ ಭಾವನೆಗಳೊಂದಿಗೆ ಚೆಲ್ಲಾಟವಾಡುವ ಕ್ರೂರ ಪದ್ಧತಿಗೆ ಶೀಘ್ರದಲ್ಲೇ ತೆರೆಬೀಳಲಿದೆ. ಬಡ ಹಾಗೂ ಮಧ್ಯಮ ವರ್ಗದ ಜನರ ಆಕ್ರೋಶಕ್ಕೆ ಸ್ಪಂದಿಸಿರುವ ಸರ್ಕಾರ, ಮೃತದೇಹಗಳ ಅತಿಶಯ ಹಸ್ತಾಂತರಕ್ಕಾಗಿ ಸಂಪೂರ್ಣ ಹೊಸ ಮತ್ತು ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ.

ಹೊಸದಾಗಿ ರೂಪಿಸಲಾಗುತ್ತಿರುವ ಈ ಪಾಲಿಸಿಯ ಪ್ರಕಾರ, ಆಸ್ಪತ್ರೆಯ ಲಕ್ಷಾಂತರ ರೂಪಾಯಿ ಬಿಲ್ ಬಾಕಿ ಉಳಿದಿದೆ ಎಂಬ ಏಕೈಕ ಕಾರಣಕ್ಕೆ ಯಾವುದೇ ಖಾಸಗಿ ಅಥವಾ ಕಾರ್ಪೊರೇಟ್ ಆಸ್ಪತ್ರೆಗಳು ಮೃತದೇಹವನ್ನು ತಡೆಹಿಡಿಯುವಂತಿಲ್ಲ. ಹಣಕಾಸಿನ ವಿವಾದಗಳು ಅಥವಾ ಬಾಕಿ ವಸೂಲಾತಿಯನ್ನು ಶವವನ್ನು ಒತ್ತೆಯಾಗಿಟ್ಟುಕೊಂಡು ತೀರಿಸಿಕೊಳ್ಳುವ ಅನಾಗರಿಕ ಪದ್ಧತಿಯನ್ನು ಕಾನೂನುಬಾಹಿರಗೊಳಿಸಲಾಗುತ್ತಿದ್ದು, ಆಸ್ಪತ್ರೆಗಳು ಯಾವುದೇ ವಿಳಂಬವಿಲ್ಲದೆ ಮೃತದೇಹವನ್ನು ತಕ್ಷಣವೇ ಸಂಬಂಧಿಕರಿಗೆ ಹಸ್ತಾಂತರಿಸುವುದು ಕಡ್ಡಾಯವಾಗಲಿದೆ.

ದುಃಖದಲ್ಲSರುವ ಕುಟುಂಬಕ್ಕೆ ಆರ್ಥಿಕ ಸಂಕಷ್ಟದ ಜೊತೆಗೆ ಆಸ್ಪತ್ರೆಯ ಈ ರೀತಿಯ ಕಿರುಕುಳ ತಪ್ಪಿಸುವುದು ಈ ನೀತಿಯ ಮುಖ್ಯ ಉದ್ದೇಶವಾಗಿದೆ. ಒಂದು ವೇಳೆ ಹೊಸ ನಿಯಮವನ್ನು ಉಲ್ಲಂಘಿಸಿ ಆಸ್ಪತ್ರೆಗಳು ಶವವನ್ನು ಒತ್ತೆಯಿಟ್ಟುಕೊಂಡರೆ ಅಂತಹ ಆಸ್ಪತ್ರೆಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಸರ್ಕಾರದ ಈ ಮಾನವೀಯ ನಿರ್ಧಾರದಿಂದಾಗಿ ಮೃತರ ಅಂತಿಮ ಸಂಸ್ಕಾರವನ್ನು ನೆರವೇರಿಸಲು ಪರದಾಡುತ್ತಿದ್ದ ಸಾವಿರಾರು ಕುಟುಂಬಗಳಿಗೆ ದೊಡ್ಡ ಮಟ್ಟದ ನೆರವು ಸಿಗಲಿದೆ.

Leave a Reply

Your email address will not be published. Required fields are marked *