Greater Bengaluru News9 : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಉಚಿತ ವಿದ್ಯುತ್ ಯೋಜನೆಯಾದ ಗೃಹಜ್ಯೋತಿಯ ಸೌಲಭ್ಯ ಪಡೆಯುತ್ತಿರುವ ಲಕ್ಷಾಂತರ ಗ್ರಾಹಕರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಈಗಾಗಲೇ ಜಾರಿಯಲ್ಲಿರುವ ಮನೆ-ಮನೆ ಸಮೀಕ್ಷೆ ಹಾಗೂ ದಾಖಲೆಗಳ ಮರುಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇದ್ದ ಅಂತಿಮ ಗಡುವನ್ನು ಮುಂದುವರಿಸಲಾಗಿದ್ದು, ಫಲಾನುಭವಿಗಳಿಗೆ ಮತ್ತಷ್ಟು ಕಾಲಾವಕಾಶ ನೀಡಲಾಗಿದೆ.
ಮರುಪರಿಶೀಲನೆಗೆ ಅಕ್ಟೋಬರ್ 31ರವರೆಗೆ ಅವಕಾಶ
ರಾಜ್ಯಾದ್ಯಂತ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಮನೆ ಮಾಲೀಕರು ಮತ್ತು ಬಾಡಿಗೆದಾರರ ದಾಖಲೆಗಳ ಪರಿಶೀಲನೆಗೆ ನಿಗದಿಪಡಿಸಲಾಗಿದ್ದ ಕೊನೆಯ ದಿನಾಂಕವನ್ನು ಅಕ್ಟೋಬರ್ 31, 2026ರವರೆಗೆ ವಿಸ್ತರಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ ನಿಗದಿಪಡಿಸಿದ್ದ ಗಡುವು ಸೆಪ್ಟೆಂಬರ್ 30ಕ್ಕೆ ಮುಕ್ತಾಯಗೊಂಡಿತ್ತು. ಆದರೆ ಇನ್ನೂ ಕೆಲವು ಕಡೆಗಳಲ್ಲಿ ಪರಿಶೀಲನೆ ಬಾಕಿ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಶೇ. 98ರಷ್ಟು ಸಮೀಕ್ಷೆ ಯಶಸ್ವಿ, ಉಳಿದವರಿಗಾಗಿ ವಿಸ್ತರಣೆ
ರಾಜ್ಯದ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ ಈವರೆಗೆ ಸುಮಾರು ಶೇ. 98ರಷ್ಟು ಮನೆ-ಮನೆ ಸಮೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ಆದರೂ, ಅಲ್ಲಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ಮತ್ತು ಕೆಲವರ ದಾಖಲೆಗಳು ಬಾಕಿ ಉಳಿದುಕೊಂಡಿರುವುದರಿಂದ, ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಯೋಜನೆಯ ಲಾಪು ಸಿಗಲಿ ಎಂಬ ಸದುದ್ದೇಶದಿಂದ ಸರ್ಕಾರ ಈ ಹೆಚ್ಚುವರಿ ಸಮಯಾವಕಾಶ ಕಲ್ಪಿಸಿದೆ.
ಬಾಕಿ ಉಳಿದಿರುವ ಪ್ರಮುಖ ಪ್ರಕರಣಗಳ ವಿಲೇವಾರಿ
ಪ್ರಮುಖವಾಗಿ ಮನೆಗಳಿಗೆ ಸದಾ ಬೀಗ ಹಾಕಿರುವುದು, ಮಾಲೀಕರು ಅಥವಾ ಬಾಡಿಗೆದಾರರು ಸ್ಥಳದಲ್ಲಿ ಲಭ್ಯವಿಲ್ಲದಿರುವುದು, ಕೆಲವರು ಮಾಹಿತಿ ನೀಡಲು ಹಿಂಜರಳಿರುವುದು ಹಾಗೂ ಖಾಲಿ ಇರುವ ವಸತಿ ಸಮುಚ್ಚಯಗಳ ಭೌತಿಕ ಪರಿಶೀಲನೆಯನ್ನು ನೈಜವಾಗಿ ಪೂರ್ಣಗೊಳಿಸಲು ಈ ಹೆಚ್ಚುವರಿ ಕಾಲಾವಕಾಶ ಅತ್ಯಂತ ಅವಶ್ಯಕವಾಗಿತ್ತು ಎಂದು ಇಲಾಖೆ ತಿಳಿಸಿದೆ.
ಎಸ್ಕಾಂ ಸಿಬ್ಬಂದಿಯಿಂದ ಕಡ್ಡಾಯ ಮಾಹಿತಿ ಸಂಗ್ರಹ
ವಿದ್ಯುತ್ ಸರಬರಾಜು ಕಂಪನಿಗಳ ಮೀಟರ್ ರೀಡರ್‌ಗಳು ಹಾಗೂ ನೇಮಕಗೊಂಡ ಸಿಬ್ಬಂದಿ ನೇರವಾಗಿ ಮನೆಗಳಿಗೆ ಭೇಟಿ ನೀಡಿ ಪ್ರಮುಖ ವಿವರಗಳನ್ನು ಕಲೆಹಾಕುತ್ತಿದ್ದಾರೆ. ಪಡಿತರ ಚೀಟಿ (Ration Card), ಮತದಾರರ ಗುರುತಿನ ಚೀಟಿ ವಿವರಗಳ ಜೊತೆಗೆ ಅರ್ಜಿದಾರರ ಇತ್ತೀಚಿನ ಭಾವಚಿತ್ರ, ಪ್ರವರ್ಗ, ಆದಾಯ ತೆರಿಗೆ ಪಾವತಿ ಮತ್ತು ವೃತ್ತಿ ವಿವರಗಳನ್ನು ‘ಸೇವಾಸಿಂಧು’ ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಲಾಗುತ್ತಿದೆ.
ಮೇಲ್ಛಾವಣಿ ಸೌರ ವಿದ್ಯುತ್ ಹಾಗೂ ಜಕಾತಿ ವಿವರ ಪರಿಶೀಲನೆ
ಈ ಸಮೀಕ್ಷೆಯ ವೇಳೆ ಕೇವಲ ಮೂಲ ದಾಖಲೆಗಳಷ್ಟೇ ಅಲ್ಲದೆ, ಮನೆಗಳ ಜಕಾತಿ ಬದಲಾವಣೆ ಹಾಗೂ ಮೇಲ್ಛಾವಣಿಯಲ್ಲಿ (Rooftop Solar) ಸೌರ ವಿದ್ಯುತ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಮನೆಗಳ ಕುರಿತಾದ ಸಮಗ್ರ ವಿವರಗಳನ್ನು ಸಹ ಕಲೆಹಾಕಿ ದಾಖಲಿಸಿಕೊಳ್ಳಲಾಗುತ್ತಿದೆ.
ಮನೆಗೆ ಬೀಗವಿದ್ದರೆ ಸಿಬ್ಬಂದಿ ಬಿಡ3 ಬಾರಿ ಭೇಟಿ
ಮೀಟರ್ ರೀಡರ್‌ಗಳು ಅಥವಾ ಸಿಬ್ಬಂದಿ ಪರಿಶೀಲನೆಗಾಗಿ ಮನೆಗೆ ಬಂದಾಗ ಬಾಗಿರುವುದೆಂದು ಆತಂಕಪಡಬೇಕಿಲ್ಲ. ಇಂತಹ ಮನೆಗಳಿಗೆ ಸಿಬ್ಬಂದಿ ವಿವಿಧ ಸಮಯಗಳಲ್ಲಿ ಒಟ್ಟು ಮೂರು ಬಾರಿ ಭೇಟಿ ನೀಡಲಿದ್ದಾರೆ. ಈ ವೇಳೆ ಜಿಪಿಎಸ್ (GPS) ಲೋಕೇಶನ್ ದಾಖಲಿಸಿ, ಮೀಟರ್ ರೀಡರ್ ಹೆಸರು ಹಾಗೂ ದೂರವಾಣಿ ಸಂಖ್ಯೆ ಇರುವ ಎಸ್‌ಎಂಎಸ್ ಅನ್ನು ಫಲಾನುಭವಿಯ ಮೊಬೈಲ್‌ಗೆ ಕಳುಹಿಸಲಾಗುತ್ತದೆ.
ಫಲಾನುಭವಿಗಳು ಮಾಡಬೇಕಾದ ತುರ್ತು ಕೆಲಸ
ನಿಮ್ಮ ಮನೆಗೆ ಸಿಬ್ಬಂದಿ ಬಂದಾಗ ಅಗತ್ಯವಿರುವ ದಾಖಲೆಗಳನ್ನು ಒದಗಿಸಿ ಸಹಕರಿಸುವುದು ಕಡ್ಡಾಯವಾಗಿದೆ. ನೋಂದಾಯಿತ ಫಲಾನುಭವಿಗಳು ಲಭ್ಯವಿಲ್ಲದಿದ್ದಲ್ಲಿ ಮನೆಯ ಹಿರಿಯ ಸದಸ್ಯರು ಘೋಷಣಾ ಪತ್ರಕ್ಕೆ ಸಹಿ ಹಾಕಬಹುದು. ಒಂದು ವೇಳೆ ಎಸ್‌ಎಂಎಸ್ ಬಂದಿದ್ದರೆ, ಗ್ರಾಹಕರು ಕೂಡಲೇ ಆ ಸಿಬ್ಬಂದಿಯನ್ನು ಸಂಪರ್ಕಿಸಿ ಅಕ್ಟೋಬರ್ 31ರೊಳಗೆ ನಿಮ್ಮ ಪರಿಶೀಲನಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿಕೊಳ್ಳಬಹುದು.

