ChatGPT Image Oct 3, 2026, 08_41_04 PM-modified
GREATER BENGALURU NEWS 9
BBMP

ಬೆಂಗಳೂರು:- ಸತತ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಬೆಂಗಳೂರು ಮಂದಿಗೆ ಮತ್ತೊಂದು ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಬೃಹತ್ ಬಜೆಟ್ ಮಂಡಿಸಿದ BBMP ಸದ್ದಿಲ್ಲದೆ ಸಿಟಿ ಜನರಿಗೆ ಬರೆ ಎಳೆದಿದೆ. ಏಪ್ರಿಲ್ 1ರಿಂದ ಅನ್ವಯವಾಗುವಂತೆ ಕಸಕ್ಕೆ ಸೆಸ್​​ ವಸೂಲಿ ಆಗಲಿದ್ದು, ಕೋಟಿ ಕೋಟಿ ಆದಾಯ ಗಳಿಸುವ ಲೆಕ್ಕಾಚಾರ ಇಟ್ಟುಕೊಂಡಿದೆ.

ನಾಳೆಯಿಂದ ಕಸದ ಮೇಲೆ ಸೆಸ್ ಜಾರಿ ಆಗಲಿದೆ. ಮನೆ ಮನೆ ಕಸ ಸಂಗ್ರಹಿಸಲು ಇನ್ನೂ ಮುಂದೆ ತೆರಿಗೆ ಕಟ್ಟಬೇಕು. ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯಿಂದ ಕಸದ ಮೇಲೆ ಸೆಸ್ ವಿಧಿಸಲಾಗಿದೆ. ಪ್ರತಿ ತಿಂಗಳು ಕಸ ಸಂಗ್ರಹ ಹಾಗೂ ವಿಲೇವಾರಿ ವೆಚ್ಚ ಎಂದು ವಸೂಲಿ ಮಾಡಲು ಬಿಬಿಎಂಪಿ ಮುಂದಾಗಿದೆ. ಅಂಗಡಿ, ಹೋಟೆಲ್‍ಗಳಿಗೆ ಒಂದು ತೆರಿಗೆ, ರೆಸಿಡೆನ್ಷಿಯಲ್ ಕಟ್ಟಡಗಳಿಗೆ ಮತ್ತೊಂಡು ರೀತಿ ಕಸದ ಸೆಸ್ ವಿಧಿಸಲು ನಿರ್ಧರಿಸಲಾಗಿದೆ.

ಹೋಟೆಲ್‍ಗಳಿಗೆ ಮೊದಲು ಒಂದು ಕೆಜಿ ಕಸಕ್ಕೆ 5 ರೂ. ನಿಗದಿ ಮಾಡಲಾಗಿತ್ತು. ಈಗ 12 ರೂ.ಗೆ ಏರಿಸಲಾಗಿದೆ. ರೆಸಿಡೆನ್ಸಿಯಲ್ ಕಟ್ಟಡಗಳಿಗೆ ಕಟ್ಟಡದ ಚದರ ಅಡಿ ಲೆಕ್ಕದಲ್ಲಿ ಕಸಕ್ಕೆ ಸೆಸ್ ಹಾಕಲಿದ್ದಾರೆ.

ಎಷ್ಟು ಚದರ ಕಟ್ಟಡಕ್ಕೆ ಎಷ್ಟು ತೆರಿಗೆ?
* 600 ಚದರ ಅಡಿವರೆಗಿನ ಕಟ್ಟಡಗಳಿಗೆ ತಿಂಗಳಿಗೆ 10 ರೂ.
* 600 ಚದರ ದಿಂದ 1000 ಚದರವರೆಗಿನ ಕಟ್ಟಡಗಳಿಗೆ ತಿಂಗಳಿಗೆ 50 ರೂ.
* 1 ಸಾವಿರದಿಂದ 2 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 100 ರೂ.
* 2 ಸಾವಿರದಿಂದ 3 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 150 ರೂ.
* 3 ಸಾವಿರ ದಿಂದ 4 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 200 ರೂ.
* 4 ಸಾವಿರ ಚದರ ಅಡಿಗಳ ಮೇಲ್ಪಟ್ಟ ಕಟ್ಟಡಗಳಿಗೆ ತಿಂಗಳಿಗೆ 400 ರೂ.

ಮ್ಯಾನ್ಮಾರ್ ಭೂಕಂಪ: ಸಾವಿನ ಸಂಖ್ಯೆ 1644ಕ್ಕೆ ಏರಿಕೆ, 3,000ಕ್ಕೂ ಹೆಚ್ಚು ಮಂದಿಗೆ ಗಾಯ, ಭಾರತದಿಂದ ಆಪರೇಷನ್ ಬ್ರಹ್ಮ ನೆರವಿನ ಹಸ್ತ

Leave a Reply

Your email address will not be published. Required fields are marked *