ChatGPT Image Oct 3, 2026, 08_41_04 PM-modified
GREATER BENGALURU NEWS 9
School Bus

ಬೆಂಗಳೂರು:- ಕರ್ನಾಟಕ ರಾಜ್ಯ ಸರ್ಕಾರ ಅತ್ತ ಹಾಲು, ಬಸ್ ಪ್ರಯಾಣ ದರ, ಮೆಟ್ರೋ ದರ ಬಳಿಕ ಹಾಲು, ವಿದ್ಯುತ್ ದರ ಏರಿಸಿ ಶಾಕ್ ಕೊಟ್ಟಿತ್ತು. ಅಲ್ಲದೇ ಡೀಸೆಲ್ ಬೆಲೆಯನ್ನೂ 2ರೂ ಹೆಚ್ಚಳ ಮಾಡಿದೆ.

ಇದೀಗ ಡೀಸೆಲ್‌ ಬೆಲೆ ಹೆಚ್ಚಳದ ಹೊರೆಯನ್ನು ಪೋಷಕರ ಹೆಗಲಿಗೆ ಹಾಕಲು ಖಾಸಗಿ ಶಾಲಾ ವಾಹನ ಸಂಘ ನಿರ್ಧಾರ ಕೈಗೊಂಡಿದೆ. ಪ್ರತಿ ಲೀಟರ್‌ ಡೀಸೆಲ್‌ ದರ 2 ರೂ. ಏರಿಕೆಯಾದ ಹಿನ್ನೆಲೆಯಲ್ಲಿ ಶಾಲಾ ವಾಹನದ ಶುಲ್ಕವನ್ನು ಹೆಚ್ಚಿಸಲು ಸಂಘ ನಿರ್ಧಾರ ಕೈಗೊಂಡಿದೆ.

ಸದ್ಯ ತಿಂಗಳಿಗೆ 2,000 ರೂ – 3,000 ರೂ. ಶುಲ್ಕವಿದೆ. ದರ ಏರಿಕೆಯಿಂದ 2,500 ರೂ- 3,500 ರೂ.ಗೆ ಏರಿಕೆಯಾಗಲಿದೆ. ಇದೇ ಶೈಕ್ಷಣಿಕ ವರ್ಷದಿಂದ ನೂತನ ದರ ಜಾರಿಯಾಗಲಿದೆ. ಸದ್ಯ ಬೆಂಗಳೂರಲ್ಲೇ 7 ಸಾವಿರಕ್ಕೂ ಅಧಿಕ ಶಾಲಾ ವಾಹನಗಳು ಇವೆ. ಸಾವಿರಾರು ವಿದ್ಯಾರ್ಥಿಗಳು ಖಾಸಗಿ ವಾಹನದಲ್ಲೇ ನಿತ್ಯ ಶಾಲೆಗೆ ತೆರಳುತ್ತಿದ್ದಾರೆ.

ಭ್ರಷ್ಟಾಚಾರದಲ್ಲಿ ಕರ್ನಾಟಕವೇ ನಂಬರ್‌ ಒನ್‌: ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರೆಡ್ಡಿ ಅಚ್ಚರಿ ಹೇಳಿಕೆ

Leave a Reply

Your email address will not be published. Required fields are marked *