ChatGPT Image Oct 3, 2026, 08_41_04 PM-modified
GREATER BENGALURU NEWS 9
BESCOM

ಚಿಕ್ಕಬಳ್ಳಾಪುರ: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಗೆ ವಿದ್ಯುತ್ ಶಾಕ್ ಆತಂಕ ನಿರಂತರವಾಗಿ ಕಾಡುತ್ತಿದೆ. ಹೌದು ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯೊಂದರಲ್ಲೇ ವಿದ್ಯುತ್ ಅವಘಡದಿಂದ 29 ಮಂದಿ ಮೃತಪಟ್ಟಿದ್ದಾರೆ. ಕೇವಲ ಮನುಷ್ಯರು ಮಾತ್ರವಲ್ಲ 19 ಜಾನುವಾರುಗಳು ವಿದ್ಯುತ್ ಶಾಕ್ ಗೆ ಒಳಗಾಗಿ ಪ್ರಾಣ ಕಳೆದುಕೊಂಡಿವೆ.

2024 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೀಕರ ವಿದ್ಯುತ್ ಅವಘಡವೂ ನಡೆದಿತ್ತು. ಶಾಲಾ ಕ್ರೀಡಾಕೂಟದಲ್ಲಿ ಉಂಟಾದಂತ ಭೀಕರ ವಿದ್ಯುತ್ ಅವಘಡದಿಂದಾಗಿ ಓರ್ವ ಸಾವನ್ನಪ್ಪಿದ್ದರು. ಅಷ್ಟೇ ಅಲ್ಲದೆ, 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಜಿಲ್ಲೆಯ ಗೌರಿಬಿದನೂರು ಶಾರದಾ ಶಾಲೆಯಲ್ಲಿ ಶಾಲಾ ಕ್ರೀಢಾಕೂಟವನ್ನು ಆಯೋಜಿಸಲಾಗಿತ್ತು. ಈ ವೇಳೆಯಲ್ಲಿ ವಿದ್ಯುತ್ ಅವಘಡ ಉಂಟಾಗಿತ್ತು. ವಿದ್ಯುತ್ ಅವಘಡದಲ್ಲಿ ನಾಗೇನಹಳ್ಳಿಯ ನಿವಾಸಿ ರಾಘವೇಂದ್ರ ಎಂಬುವವರು ಮೃತಪಟ್ಟಿದ್ದರು.

ಯಾವ ವರ್ಷದಲ್ಲಿ ಎಷ್ಟು ಮಂದಿ ಬಲಿ?
2021-22
ಪ್ರಕರಣಗಳ ಸಂಖ್ಯೆ – 7
ಮೃತರ ಸಂಖ್ಯೆ – 7

2022-23
ಪ್ರಕರಣಗಳ ಸಂಖ್ಯೆ – 4
ಮೃತರ ಸಂಖ್ಯೆ -5

2023 -24
ಪ್ರಕರಣಗಳ ಸಂಖ್ಯೆ -11
ಮೃತರ ಸಂಖ್ಯೆ -11

2024 -25
ಪ್ರಕರಣಗಳ ಸಂಖ್ಯೆ – 6
ಮೃತರ ಸಂಖ್ಯೆ – 6
ಜಾರುವಾರುಗಳ ಪ್ರಾಣ ಹಾನಿ

2021 -22
ಪ್ರಕರಣಗಳ ಸಂಖ್ಯೆ – 4
ಮೃತ ಪಟ್ಟ ಜಾನುವಾರು -4

2022-23
ಪ್ರಕರಣಗಳ ಸಂಖ್ಯೆ – 5
ಮೃತ ಪಟ್ಟ ಜಾನುವಾರು- 5

2023-24
ಪ್ರಕರಣಗಳ ಸಂಖ್ಯೆ -3
ಮೃತ ಪಟ್ಟ ಜಾನುವಾರು – 3

2024-25
ಪ್ರಕರಣಗಳ ಸಂಖ್ಯೆ – 1
ಮೃತ ಪಟ್ಟ ಜಾನುವಾರು – 2

ಪರಿಹಾರ ಸಿಕ್ಕಿದ್ಯಾ?
ವಿದ್ಯುತ್ ಅವಘಡದಿಂದ ಮೃತಪಟ್ಟವರಿಗೆ 2021-22 ನೇ ಸಾಲಿನಲ್ಲಿ ಒಟ್ಟು 7 ಪ್ರಕರಣಗಳಲ್ಲಿ ಕೇವಲ ಇಬ್ಬರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಲಾಗಿದೆ. ಉಳಿದ ನಾಲ್ವರ ಕುಟುಂಬಕ್ಕೆ ಯಾವುದೇ ಪರಿಹಾರ ನೀಡಿಲ್ಲ.
2022 ಹಾಗೂ 23 ರಲ್ಲಿ 4 ಪ್ರಕರಣಗಳಲ್ಲಿ ಒಂದು ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗಿದೆ. 2023 ಹಾಗೂ 24 ರಲ್ಲಿ 11 ಪ್ರಕರಣಗಳಲ್ಲಿ ಕೇವಲ 2 ಕುಟುಂಬಕ್ಕೆ ಮಾತ್ರ 10 ಲಕ್ಷ ಪರಿಹಾರವನ್ನು ನೀಡಲಾಗಿದೆ. ಇನ್ನು 2024- 25 ರಲ್ಲಿ 6 ಪ್ರಕರಣಗಳಲ್ಲಿ ಒಂದು ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗಿದೆ.

ಬಾಕಿ ಇರುವ ಪ್ರಕರಣಗಳಲ್ಲಿ ವಿದ್ಯುತ್ ಪರೀಕ್ಷಕರ ವರದಿ ಮತ್ತು ಸಂಬಂಧ ಪಟ್ಟ ಅಧಿಕಾರಿಗಳ ವರದಿಯನ್ನು ಪರಿಶೀಲನೆ ಮಾಡಿ ಪರಿಹಾರ ನೀಡಬೇಕಾಗಿ ಬಂದಲ್ಲಿ ಹಾಗೂ ಸೂಕ್ತ ದಾಖಲೆಗಳನ್ನು ನೀಡಲಿದ್ದಲ್ಲಿ ಪರಿಹಾರವನ್ನು ವಿತರಿಸಲಾಗುವುದು ಎಂದು ಇಂಧನ ಇಲಾಖೆ ಉತ್ತರಿಸಿದೆ.

ಅಹಮದಾಬಾದ್‌ ವಿಮಾನ ದುರಂತ: ಶ್ರೀ ರಾಮ ಮಂದಿರ ವಾರ್ಡ್‌ನಲ್ಲಿ ಮೇಣದಬತ್ತಿ ಹಚ್ಚಿ ಸಂತಾಪ

Leave a Reply

Your email address will not be published. Required fields are marked *