ChatGPT Image Oct 3, 2026, 08_41_04 PM-modified
GREATER BENGALURU NEWS 9
BESCOM

Greater Bengaluru News9 : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು (BESCOM) ಕಟ್ಟಡ ಬೈ-ಲಾ (Building Bye-Law) ಉಲ್ಲಂಘನೆಗಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಕುರಿತಂತೆ ಹಿಂದೆ ಹೊರಡಿಸಿದ್ದ ಸುತ್ತೋಲೆಯನ್ನು ಮುಂದಿನ ಆದೇಶದವರೆಗೆ ಅಧಿಕೃತವಾಗಿ ಸ್ಥಗಿತಗೊಳಿಸಿದೆ. ಕರ್ನಾಟಕ ಹೈಕೋರ್ಟ್‌ನ ಇತ್ತೀಚಿನ ತೀರ್ಪಿನ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಅನುಮೋದನೆಯೊಂದಿಗೆ ಈ ಹೊಸ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಬಾಬುಸಾಪಾಳ್ಯದಲ್ಲಿ ನಡೆದ ಕಟ್ಟಡ ದುರಘಟನೆಯ ನಂತರ ಮತ್ತು ಸುಪ್ರೀಂ ಕೋರ್ಟ್ ಹಾಗೂ ಲೋಕಾಯುಕ್ತರ ನಿರ್ದೇಶನಗಳ ಅನುಸಾರ, ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲು ಬೆಸ್ಕಾಂಗೆ ಸೂಚಿಸಲಾಗಿತ್ತು. ಇದರನ್ವಯ 2024ರ ನವೆಂಬರ್ 28ರಂದು ಸುತ್ತೋಲೆ ಹೊರಡಿಸಿ, ಸ್ಥಳೀಯ ಪ್ರಾಧಿಕಾರಗಳ ಆದೇಶದ ಮೇರೆಗೆ 7 ದಿನಗಳ ನೋಟೀಸ್ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಕ್ಷೇತ್ರಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು.

ಆದಾಗ್ಯೂ, ರಿಟ್ ಪಿಟಿಷನ್ ಸಂಖ್ಯೆ 28323/2026ರ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಬೆಸ್ಕಾಂನ ಈ ಕ್ರಮವನ್ನು ತೀವ್ರವಾಗಿ ಪ್ರಶ್ನಿಸಿದೆ. ಕಟ್ಟಡವು ಅನುಮೋದಿತ ನಕ್ಷೆ ಅಥವಾ ಬೈ-ಲಾ ಉಲ್ಲಂಘಿಸಿದೆಯೇ ಎಂಬುದನ್ನು ನಿರ್ಧರಿಸುವ ಅಧಿಕಾರ ಬೆಸ್ಕಾಂಗೆ ಇಲ್ಲವೆಂದೂ, ಆ ವಿಚಾರ ಸ್ಥಳೀಯ ಪ್ರಾಧಿಕಾರಗಳ ಮುಂದೆ ಬಾಕಿ ಇರುವಾಗ ಬೆಸ್ಕಾಂ ತರಾತುರಿಯಲ್ಲಿ ವಿದ್ಯುತ್ ಕಡಿತಗೊಳಿಸಬಾರದು ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೆ, ಬಿಡಿಎ (BDA) ಮುಂದೆ ವಿವಾದವಿರುವ ಕಾರಣ ತಕ್ಷಣವೇ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸುವಂತೆ ನ್ಯಾಯಾಲಯವು ನಿರ್ದೇಶನ ನೀಡಿದೆ.

ಈ ಹಿನ್ನೆಲೆಯಲ್ಲಿ, ಹಿಂದಿನ ಸುತ್ತೋಲೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬಾರದು ಎಂದು ಬೆಸ್ಕಾಂನ ಎಲ್ಲಾ ಕ್ಷೇತ್ರಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಕೇವಲ ಬೈ-ಲಾ ಉಲ್ಲಂಘನೆಯ ಆರೋಪವಿರುವ ಕಾರಣಕ್ಕಾಗಲಿ ಅಥವಾ ಸ್ಥಳೀಯ ಪ್ರಾಧಿಕಾರಗಳಲ್ಲಿ ಪ್ರಕರಣಗಳು ಬಾಕಿ ಇವೆ ಎಂಬ ಕಾರಣಕ್ಕಾಗಲಿ ಇನ್ನು ಮುಂದೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ.

ಹಾಗuರೂ, ಸಾರ್ವಜನಿಕ ವಿದ್ಯುತ್ ಸುರಕ್ಷತೆಯ ದೃಷ್ಟಿಯಿಂದ ಈ ಸುತ್ತೋಲೆಯಲ್ಲಿ ಒಂದು ವಿನಾಯಿತಿಯನ್ನು ನೀಡಲಾಗಿದೆ. ಒಂದು ವೇಳೆ ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರವು ಅಧಿಕೃತವಾಗಿ ಯಾವುದೇ ಅನಧಿಕೃತ ಕಟ್ಟಡ ಅಥವಾ ರಚನೆಯನ್ನು ಧ್ವಂಸ ಮಾಡುವ (Demolition) ಕಾರ್ಯಾಚರಣೆಗೆ ಮುಂದಾದರೆ, ಸುರಕ್ಷತೆಯನ್ನು ಕಾಪಾಡಲು ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮೀಟರ್ ಅನ್ನು ತೆರವುಗೊಳಿಸಬಹುದಾಗಿದೆ.

Leave a Reply

Your email address will not be published. Required fields are marked *