ChatGPT Image Oct 3, 2026, 08_41_04 PM-modified
GREATER BENGALURU NEWS 9
Rajajinagar Murder

Greater Bengaluru News9 : ರಾಜಾಜಿನಗರದ ಏಳು ಮಂದಿಯ ಭೀಕರ ಕೊಲೆ ಪ್ರಕರಣದಲ್ಲಿ ಆರೋಪಿ ಇಂದುಶೇಖರ್‌ನ ಕ್ರೂರ ಕೃತ್ಯಗಳ ಒಂದೊಂದೇ ವಿವರಗಳು ಹೊರಬರುತ್ತಿವೆ.

ಕೊಲೆ ಮಾಡಿದ ಬಳಿಕ ಮೃತದೇಹಗಳಿಂದ ದುರ್ವಾಸನೆ ಹೊರಬರದಂತೆ ತಡೆಯಲು ಪ್ರತಿಯೊಂದು ಶವಕ್ಕೂ ಸುಮಾರು 10 ಸುತ್ತು ಟೇಪ್ ಸುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ನಂದಿಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿದ್ದ ಬಾಲಕ ಪುನೀತ್‌ನ ಮೃತದೇಹಕ್ಕೂ ಇದೇ ರೀತಿ ಟೇಪ್ ಸುತ್ತಲಾಗಿತ್ತು ಎನ್ನಲಾಗಿದೆ. ಮನೆಯ ಕೆಳಭಾಗದಲ್ಲಿ ಅಂಗಡಿಗಳಿದ್ದರೆ, ಆರೋಪಿ ಮೇಲಿನ ಮಹಡಿಯಲ್ಲಿ ವಾಸವಿದ್ದ. ರಾತ್ರಿ ವೇಳೆ ಜನರ ಓಡಾಟ ಕಡಿಮೆ ಇರುತ್ತಿದ್ದುದರಿಂದ ಕೃತ್ಯದ ಸುಳಿವು ಯಾರಿಗೂ ಸಿಗದಂತೆ ಎಚ್ಚರ ವಹಿಸಿದ್ದ ಎನ್ನಲಾಗಿದೆ.

ಮನೆಯಲ್ಲಿದ್ದ ಮೃತದೇಹಗಳ ದುರ್ವಾಸನೆ ಹೊರಗೆ ಹರಡದಂತೆ ಟೇಪ್ ಸುತ್ತಿ, ಬಳಿಕ ಮುಂಜಾನೆ ವೇಳೆ ಕಾರಿನಲ್ಲಿ ಶವಗಳನ್ನು ಸಾಗಿಸುತ್ತಿದ್ದ ಎಂಬ ಮಾಹಿತಿ ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಯ ಈ ಕೃತ್ಯಗಳ ಹಿಂದಿನ ಉದ್ದೇಶ ಹಾಗೂ ಸಂಪೂರ್ಣ ಸಂಚಿನ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬಾಲಕ ಪುನೀತ್ ಅಂತ್ಯಕ್ರಿಯೆ ಪೂರ್ಣ
ಇನ್ನು ಈ ಹತ್ಯಾಕಾಂಡದಲ್ಲಿ ಬಲಿಯಾಗಿದ್ದ ಪುಟ್ಟ ಬಾಲಕ ಪುನೀತ್‌ನ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಚಿಕ್ಕಬಳ್ಳಾಪುರದ ನಂದಿಬೆಟ್ಟದ ತಪ್ಪಲಿನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಬೆಂಗಳೂರಿಗೆ ತರಲಾಗಿದ್ದು, ನವೆಂಬರ್ 6ರ ರಾತ್ರಿ ರಾಜಾಜಿನಗರದ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.

ಪುಟ್ಟ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಂತ್ಯಕ್ರಿಯೆ ವೇಳೆ ದುಃಖದ ವಾತಾವರಣ ನಿರ್ಮಾಣವಾಗಿತ್ತು. ಮತ್ತೊಂದೆಡೆ, ಏಳು ಮಂದಿಯ ಹತ್ಯಾಕಾಂಡದ ಹಿಂದಿನ ಕಾರಣಗಳು ಮತ್ತು ಆರೋಪಿಯ ಕೃತ್ಯಗಳ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

Leave a Reply

Your email address will not be published. Required fields are marked *