Greater Bengaluru News9: ಅಖಿಲ ಭಾರತ ಕಾಂಗ್ರೆಸ್ ಸಮಿತಿಯು (AICC) ಹಲವು ರಾಜ್ಯಗಳಿಗೆ ನೂತನ ಪ್ರಧಾನ ಕಾರ್ಯದರ್ಶಿಗಳು ಹಾಗೂ ಉಸ್ತುವಾರಿಗಳನ್ನು ನೇಮಕ ಮಾಡಿ ಶನಿವಾರ ಆದೇಶ ಹೊರಡಿಸಿದೆ.
ಕಾಂಗ್ರೆಸ್ ಅಧ್ಯಕ್ಷರ ಅನುಮೋದನೆಯೊಂದಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಈ ಕುರಿತು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಪ್ರಮುಖ ರಾಜ್ಯಗಳ ಉಸ್ತುವಾರಿಗಳ ಪಟ್ಟಿ:
ಗುಜರಾತ್ & ಕರ್ನಾಟಕ: ರಣದೀಪ್ ಸಿಂಗ್ ಸುರ್ಜೇವಾಲಾ (ಗುಜರಾತ್‌ನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದು, ಜೊತೆಗೆ ಕರ್ನಾಟಕದ ಹೆಚ್ಚುವರಿ ಜವಾಬ್ದಾರಿಯನ್ನೂ ಮುಂದುವರಿಸಲಿದ್ದಾರೆ)
- ಅಸ್ಸಾಂ: ಭೂಪೇಶ್ ಬಘೇಲ್ (ಉಸ್ತುವಾರಿ ಪ್ರಧಾನ ಕಾರ್ಯದರ್ಶಿ)
- ಪಂಜಾಬ್: ಸಚಿನ್ ಪೈಲಟ್ (ಉಸ್ತುವಾರಿ ಪ್ರಧಾನ ಕಾರ್ಯದರ್ಶಿ)
- ಛತ್ತೀಸ್‌ಗಢ: ಸುಖದೇವ್ ಭಗತ್ (ರಾಜ್ಯ ಉಸ್ತುವಾರಿ)
- ಮಹಾರಾಷ್ಟ್ರ: ಡಾ. ಸಿರಿವೆಲ್ಲ ಪ್ರಸಾದ್ (ರಾಜ್ಯ ಉಸ್ತುವಾರಿ)
- ಆಂಧ್ರಪ್ರದೇಶ: ಪಿ.ವಿ. ಮೋಹನ್ (ರಾಜ್ಯ ಉಸ್ತುವಾರಿ)
ಇದೇ ವೇಳೆ ಮುಕುಲ್ ವಾಸ್ನಿಕ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೊರಹೋಗುತ್ತಿರುವ ನಾಯಕರಿಗೆ ಧನ್ಯವಾದ:
ಇಲ್ಲಿಯವರೆಗೆ ವಿವಿಧ ರಾಜ್ಯಗಳ ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸಿ ನಿರ್ಗಮಿಸುತ್ತಿರುವ ಪ್ರಮುಖ ನಾಯಕರಾದ ಜಿತೇಂದ್ರ ಸಿಂಗ್, ರಮೇಶ್ ಚೆನ್ನಿತ್ತಲ ಹಾಗೂ ಮಾಣಿಕ್ಕಂ ಟ್ಯಾಗೋರ್ ಅವರ ಪಕ್ಷದ ಸೇವೆಯನ್ನು ಕಾಂಗ್ರೆಸ್ ಮುಖಂಡತ್ವ ಶ್ಲಾಘಿಸಿದೆ. ಮುಂಬರುವ ಚುನಾವಣೆಗಳು ಹಾಗೂ ಪಕ್ಷ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಹೈಕಮಾಂಡ್ ಈ ಮಹತ್ವದ ಪುನಾರಚನೆ ಕೈಗೊಂಡಿದೆ.

