ChatGPT Image Oct 3, 2026, 08_41_04 PM-modified
GREATER BENGALURU NEWS 9
Cyber fraud

Greater Bengaluru News9 : ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಜನರನ್ನ ಗುರಿಯಾಗಿಸಿಕೊಂಡು ವಂಚಕರು ಹೊಸ ತಂತ್ರ ಅನುಸರಿಸುತ್ತಿದ್ದಾರೆ. `ಹಬ್ಬದ ಆಫರ್, ಉಚಿತ ಗಿಫ್ಟ್ ಗೆದ್ದಿದ್ದೀರಿ, ಈ ಲಿಂಕ್‌ ಕ್ಲಿಕ್‌ ಮಾಡಿದ್ರೆ ಹಣ ನಿಮ್ಮದಾಗುತ್ತದೆʼ ಎಂಬ ನಕಲಿ ಸಂದೇಶಗಳನ್ನ ಕಳುಹಿಸಿ ಜನರನ್ನ ವಂಚಿಸಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸರು ಜಾಗೃತಿ ಮೂಡಿಸಿದ್ದಾರೆ.

ಹಬ್ಬದ ಆಫರ್ ಎಂಬ ಹೆಸರಲ್ಲಿ ನಕಲಿ ಜಾಲತಾಣಗಳನ್ನ ಸೃಷ್ಟಿಸಿ, ಜನರ ಬ್ಯಾಂಕ್ ವಿವರ ಹಾಗೂ OTP ಪಡೆದು ಹಣ ದೋಚುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಿಚಿತ ನಂಬರ್‌ನಿಂದ ಬರುವ ಆಫರ್, ಗಿಫ್ಟ್ ಲಿಂಕ್‌ಗಳನ್ನ ಕ್ಲಿಕ್ ಮಾಡಬೇಡಿ, ಉಚಿತ ಉಡುಗೊರೆಗಳ ಆಮಿಷಕ್ಕೆ ಬಲಿಯಾಗಬೇಡಿ, OTP ಅಥವಾ ಬ್ಯಾಂಕ್ ಖಾತೆ ವಿವರಗಳನ್ನು ಯಾರಿಗೂ ನೀಡಬೇಡಿ, ಅನುಮಾನಾಸ್ಪದ ಸಂದೇಶ ಬಂದರೆ ತಕ್ಷಣ 1930ಗೆ ಕರೆ ಮಾಡಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ದೀಪಾವಳಿ ಹಬ್ಬವನ್ನು ಸಂತೋಷದಿಂದ ಆಚರಿಸಿ, ಆದರೆ ವಂಚಕರ ಬಲೆಗೆ ಬೀಳದಂತೆ ಎಚ್ಚರದಿಂದಿರಿ ಎಂದು ಮಾದನಾಯಕನಹಳ್ಳಿ ಪೊಲೀಸರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *