ChatGPT Image Oct 3, 2026, 08_41_04 PM-modified
GREATER BENGALURU NEWS 9
BNG Police

Greater Bengaluru News9 : ರಾಜ್ಯ ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಭರ್ಜರಿ ಮೇಜರ್ ಸರ್ಜರಿ ಮಾಡಿದೆ. ಇವತ್ತು (ಬುಧವಾರ) ಒಟ್ಟು 32 ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇನ್ನು ಬೆಂಗಳೂರನ್ನು ಐದು ಪೊಲೀಸ್ ಕಮಿಷನರೇಟ್‌ಗಳಾಗಿ ವಿಭಜಿಸಿ ಸರ್ಕಾರ ಆದೇಶ ಹೊರಡಿಸಿರುವ ಬೆನ್ನಲ್ಲೇ ಈ ಬೃಹತ್ ಆಡಳಿತಾತ್ಮಕ ಬದಲಾವಣೆ ನಡೆದಿದೆ. ಜೊತೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಾಂತ್ ಕುಮಾರ್ ಸಿಂಗ್ ಅವರನ್ನು ಎತ್ತಂಗಡಿ ಮಾಡಲಾಗಿದೆ.

ಬೆಂಗಳೂರಿನಲ್ಲಿ ಐದು ಕಮಿಷನರೇಟ್
ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯನ್ನು ಐದು ವಿಭಾಗಗಳಾಗಿ (ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ) ವಿಂಗಡಿಸಿ ಐದು ಕಮಿಷನರೇಟ್ ಹುದ್ದೆಗಳನ್ನು ಸರ್ಕಾರ ಸೃಷ್ಟಿಸಿದೆ. ಹೊಸದಾಗಿ ಸೃಷ್ಟಿಸಲಾದ ಎಲ್ಲಾ ಹುದ್ದೆಗಳಿಗೂ ಅಧಿಕಾರಿಗಳನ್ನು ನೇಮಕ ಮಾಡಿದೆ. ಇದರ ಜೊತೆಗೆ ಸ್ಥಳ ನಿರೀಕ್ಷೆಯಲ್ಲಿದ್ದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಎಂ.ನಿಂಬಾಳ್ಕರ್‍‌ಗೆ ಬೆಂಗಳೂರು ನಗರ (ಸಂಚಾರ) ಪೊಲೀಸ್ ಆಯುಕ್ತರ ಹುದ್ದೆಯ ಜೊತೆಗೆ, ಮೇಲ್ದರ್ಜೆಗೇರಿಸಲಾದ ರೌಡಿ ನಿಗ್ರಹ ದಳದ (Anti-Rowdy Squad) ಆಯುಕ್ತರ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಇವರು ಮುಖ್ಯ ಆಯುಕ್ತರ ಅಡಿಯಲ್ಲಿ ಅಪರಾಧ ನಿಯಂತ್ರಣದ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ.

ಬೆಂಗಳೂರಿನ 5 ನೂತನ ಕಮಿಷನರೇಟ್‌ಗಳ ಆಯುಕ್ತರು

  • ಲಭು ರಾಮ್ -ಪೊಲೀಸ್ ಆಯುಕ್ತರು, ಕೇಂದ್ರ ಬೆಂಗಳೂರು ನಗರ
  • ಡಾ. ಪಿ.ಎಸ್. ಹರ್ಷ -ಪೊಲೀಸ್ ಆಯುಕ್ತರು, ಪೂರ್ವ ಬೆಂಗಳೂರು ನಗರ
  • ವಿಕಾಶ್ ಕುಮಾರ್ ವಿಕಾಶ್ – ಪೊಲೀಸ್ ಆಯುಕ್ತರು, ಪಶ್ಚಿಮ ಬೆಂಗಳೂರು ನಗರ
  • ಡಾ. ಎಂ.ಬಿ. ಬೋರಲಿಂಗಯ್ಯ – ಪೊಲೀಸ್ ಆಯುಕ್ತರು, ಉತ್ತರ ಬೆಂಗಳೂರು ನಗರ
  • ಸಿ. ವಂಶಿ ಕೃಷ್ಣ – ಜಂಟಿ ಪೊಲೀಸ್ ಆಯುಕ್ತರು (ಆಡಳಿತ), ಬೆಂಗಳೂರು ನಗರ ಹಾಗೂ ದಕ್ಷಿಣ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಹೆಚ್ಚುವರಿ ಹೊಣೆ

Leave a Reply

Your email address will not be published. Required fields are marked *