Greater Bengaluru News9: ಕೆಇಆರ್‌ಸಿ (KERC) ಕರಡು ಪ್ರತಿಗಳ ಮಹತ್ವದ ಬೆಳವಣಿಗೆಗಳ ಕುರಿತು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ (KSLECA) ಕಾರ್ಯಕಾರಿ ಸಮಿತಿ ಸಭೆಯು ಯಶಸ್ವಿಯಾಗಿ ಸಂಪೂರ್ಣಗೊಂಡಿದೆ.
ಗೌರವ ರಾಜ್ಯಾಧ್ಯಕ್ಷರಾದ ಶ್ರೀ ರಮಶ್ ಅಧ್ಯಕ್ಷತೆ ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ಇತ್ತೀಚಿನ KERC ಕರಡು ಪ್ರತಿಗಳ ಸಾಧಕ-ಬಾಧಕಗಳ ಕುರಿತು ವಿಸ್ತೃತವಾಗಿ ಹಾಗೂ ಮಹತ್ತರವಾಗಿ ಚರ್ಚೆ ನಡೆಸಲಾಯಿತು.
ಸಭೆಯ ಪ್ರಮುಖ ನಿರ್ಣಯದಂತೆ, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ವಿಶೇಷ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಈ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳು ರಾಜ್ಯ ಕಟ್ಟಡ ಸಮಿತಿ ಛೇರ್ಮನ್ ಶ್ರೀ ಅಫ್ಜಲ್ (MS / Cresents Electricals) ಅವರೊಂದಿಗೆ ಬೆಂಗಳೂರಿನ ಮುಖ್ಯ ಅರಮನೆ ಕಚೇರಿಗೆ ಭೇಟಿ ನೀಡಿ, ಮುಖ್ಯ ವ್ಯವಸ್ಥಾಪಕರನ್ನು ಭೇಟಿಯಾದರು.

ಸಮಾವೇಶ ನಡೆಸಲು ಅರಮನೆ ಸಭಾಂಗಣದ ಲಭ್ಯತೆ ಹಾಗೂ ದಿನಾಂಕಗಳ ಕುರಿತು ಈ ಭೇಟಿಯ ವೇಳೆ ಧೃಡಪಡಿಸಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ಸಂಘದ ಪ್ರಮುಖ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಈ ಒಂದು ಭೇಟಿ ಸಮಯದಲ್ಲಿ ರಾಜ್ಯ ಗೌರವ ಉಪಾಧ್ಯಕ್ಷರಾದ ಶ್ರೀ ಹರೀಶ್ ಪಾಟೀಲ್ ರವರು, ರಾಜ್ಯ ಗೌರವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ HV. ಚಂದ್ರಬಾಬುರವರು, ಸಂಘದ ಹೋರಾಟ ಸಮಿತಿ ಚೇರ್ಮನ್ ವೈ.ಎಚ್. ಆನಂದ್, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಮೊಹಮ್ಮದ್ ಅಜಾಜ್ ರವರು, ಬೆಸ್ಕಾಂ ಪ್ರತಿನಿಧಿ MV. ಲೋಕೇಶ್ ರವರು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

