ChatGPT Image Oct 3, 2026, 08_41_04 PM-modified
GREATER BENGALURU NEWS 9
DKS and HDK

Greater Bengaluru News9 : ರಾಜ್ಯ ರಾಜಕಾರಣದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಪ್ರಸ್ತುತ ಒಕ್ಕಲಿಗ ಸಮುದಾಯದ ಅತ್ಯಂತ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಲ್ಲದೆ ಹಲವು ದಶಕಗಳಿಂದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮತ್ತು ಅವರ ಕುಟುಂಬವು ಈ ಸಮುದಾಯದ ಪ್ರಶ್ನಾತೀತ ನಾಯಕತ್ವ ಉಳಿಸಿಕೊಂಡು ಬಂದಿತ್ತು. ಹೀಗಾಗಿ ಸದ್ಯ ಎಚ್ ಡಿ ಕುಮಾರಸ್ವಾಮಿ ವರ್ಸಸ್ ಡಿಕೆ ಶಿವಕುಮಾರ್ ಮಧ್ಯೆ ಸಂಘರ್ಷ ನಡೆಯುತ್ತಿದೆ. ಇದೀಗ ಇಬ್ಬರ ಸಂಘರ್ಷ ಮಠದ ಅಂಗಳಕ್ಕೆ ತೆರಳಿದೆ.

ಕೆಂಪೇಗೌಡರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ನಿಶ್ಚಲಾನಂದ ಸ್ವಾಮೀಜಿ ಅವರು ಎಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಿ ಕೆಲಸ ಮಾಡುತ್ತಿರುವಾಗ ತೊಂದರೆ ಕೊಡುತ್ತಿದ್ದಾರೆ. ಅವರ ಮನಸ್ಸಿಗೆ ನೋವುಂಟು ಮಾಡುವ ಕೆಲಸಗಳನ್ನು ಮಾಡುತ್ತಾರೆ. ಒಂದೇ ಸಮುದಾಯದವರಾಗಿ ಅವರನ್ನು ಫ್ರೀ ಆಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಹೇಳಿದರು.

ತಪ್ಪು ಮಾಡಿದರೆ ಟೀಕೆ ಮಾಡಿ ಸೂಚನೆ ಸಲಹೆ ಕೊಡಿ, ದೂರದೃಷ್ಟಿ ಇಟ್ಟುಕೊಂಡು ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಕೆಲಸ ಮಾಡಲಿಕ್ಕೆ ಸುಗಮದ ದಾರಿಯನ್ನು ಬಿಡಬೇಕು. ಹೊಸ ಹೊಸ ಯೋಜನೆಗಳಿಗೆ ನಾವು ಸೂಕ್ತ ಸಲಹೆಗಳನ್ನು ಕೊಡಬೇಕು. ಆಗ ಬೆಂಗಳೂರು ಬೆಳೆಸಲಿಕ್ಕೆ ಈ ಸಿಎಂ ಕೈಯಲ್ಲಿ ಕೂಡ ಸಾಧ್ಯವಾಗುತ್ತವೆ ಎಂದು ಹೇಳಿದರು.

Leave a Reply

Your email address will not be published. Required fields are marked *