ChatGPT Image Oct 3, 2026, 08_41_04 PM-modified
GREATER BENGALURU NEWS 9
Vidhana Soudha

Greater Bengaluru News9 : ರಾಜ್ಯ ಸರ್ಕಾರವು 2027ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳು ಮತ್ತು ಸರ್ಕಾರಿ ನೌಕರರ ಪರಿಮಿತ ರಜಾ ದಿನಗಳ ಅಧಿಕೃತ ಪಟ್ಟಿಯನ್ನು ಶನಿವಾರ (ನವೆಂಬರ್ 21, 2026) ಪ್ರಕಟಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ರಾಜ್ಯ ಶಿಷ್ಟಾಚಾರ) ಅಧೀನ ಕಾರ್ಯದರ್ಶಿ ರವಿಕುಮಾರ್ ಎಸ್. ಅವರು ರಾಜ್ಯಪಾಲರ ಆದೇಶಾನುಸಾರ ಈ ಅಧಿಸೂಚನೆಯನ್ನು ಹೊರಡಿಸಿದ್ದಾರೆ.

ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳ ಜೊತೆಗೆ ಒಟ್ಟು 18 ಸಾರ್ವತ್ರಿಕ ರಜೆಗಳು ಮತ್ತು 19 ಪರಿಮಿತ ರಜೆಗಳನ್ನು 2027ನೇ ವರ್ಷಕ್ಕೆ ಮಂಜೂರು ಮಾಡಲಾಗಿದೆ.

2027ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ (18 ದಿನಗಳು):

  1. 15.01.2027 – ಶುಕ್ರವಾರ – ಮಕರ ಸಂಕ್ರಾಂತಿ / ಉತ್ತರಾಯಣ ಪುಣ್ಯಕಾಲ
  2. 26.01.2027 – ಮಂಗಳವಾರ – ಗಣರಾಜ್ಯೋತ್ಸವ ದಿನ
  3. 06.03.2027 – ಶನಿವಾರ – ಮಹಾ ಶಿವರಾತ್ರಿ
  4. 10.03.2027 – ಬುಧವಾರ – ಖುತುಬ್-ಎ-ರಂಜಾನ್
  5. 26.03.2027 – ಶುಕ್ರವಾರ – ಗುಡ್ ಫ್ರೈಡೇ
  6. 07.04.2027 – ಬುಧವಾರ – ಚಾಂದ್ರಮಾನ ಯುಗಾದಿ
  7. 14.04.2027 – ಬುಧವಾರ – ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ
  8. 01.05.2027 – ಶನಿವಾರ – ಕಾರ್ಮಿಕ ದಿನಾಚರಣೆ
  9. 17.05.2027 – ಸೋಮವಾರ – ಬಕ್ರೀದ್
  10. 16.06.2027 – ಬುಧವಾರ – ಮೊಹರಂ ಕಡೆ ದಿನ
  11. 04.09.2027 – ಶನಿವಾರ – ವರಸಿದ್ಧಿ ವಿನಾಯಕ ವ್ರತ
  12. 29.09.2027 – ಬುಧವಾರ – ಮಹಾಲಯ ಅಮಾವಾಸ್ಯೆ
  13. 02.10.2027 – ಶನಿವಾರ – ಗಾಂಧಿ ಜಯಂತಿ
  14. 15.10.2027 – ಶುಕ್ರವಾರ – ವಾಲ್ಮೀಕಿ ಜಯಂತಿ
  15. 28.10.2027 – ಗುರುವಾರ – ನರಕ ಚತುರ್ದಶಿ
  16. 30.10.2027 – ಶನಿವಾರ – ದೀಪಾವಳಿ
  17. 01.11.2027 – ಸೋಮವಾರ – ಕನ್ನಡ ರಾಜ್ಯೋತ್ಸವ
  18. 16.11.2027 – ಮಂಗಳವಾರ – ಕನಕದಾಸ ಜಯಂತಿ

ಭಾನುವಾರ ಮತ್ತು ಶನಿವಾರ ಬರುವ ಪ್ರಮುಖ ಹಬ್ಬಗಳು (ಪಟ್ಟಿಯಲ್ಲಿ ಸೇರಿಲ್ಲ):
ಮಹಾವೀರ ಜಯಂತಿ (ಏಪ್ರಿಲ್ 18), ಬಸವೇಶ್ವರ ಜಯಂತಿ (ಮೇ 9), ಸ್ವಾತಂತ್ರ್ಯ ದಿನಾಚರಣೆ ಮತ್ತು ಈದ್-ಮಿಲಾದ್ (ಆಗಸ್ಟ್ 15) ಹಾಗೂ ವಿಜಯದಶಮಿ (ಅಕ್ಟೋಬರ್ 10) ಭಾನುವಾರದಂದು ಬರುವುದರಿಂದ ಪ್ರತ್ಯೇಕವಾಗಿ ನಮೂದಿಸಿಲ್ಲ. ಅದೇ ರೀತಿ ಮಹಾನವಮಿ/ಆಯುಧಪೂಜೆ (ಅಕ್ಟೋಬರ್ 9) ಎರಡನೇ ಶನಿವಾರ ಹಾಗೂ ಕ್ರಿಸ್‌ಮಸ್ (ಡಿಸೆಂಬರ್ 25) ನಾಲ್ಕನೇ ಶನಿವಾರದಂದು ಬರುವುದರಿಂದ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.

Leave a Reply

Your email address will not be published. Required fields are marked *