Greater Bengaluru News9 : ರಾಜ್ಯಾದ್ಯಂತ ಹಾಫ್ ಹೆಲ್ಮೆಟ್ ನಿಷೇಧ ಮಾಡಲು ಸಾರಿಗೆ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲಿ ಕಾನೂನು ಜಾರಿಗೆ ತರಲಿ. ಈ ಕುರಿತಾಗಿ ಸಾರಿಗೆ ಸಚಿವ ಬೈರತಿ ಸುರೇಶ್ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, “ಹೊಸ ವರ್ಷಕ್ಕೆ ಈ ಹೊಸ ನಿಯಮಗಳು ಜಾರಿಗೆ ಬರಲಿವೆ. ಫುಟ್ ಪಾತ್ ನಲ್ಲಿ ಬೈಕ್ ಚಲಾಯಿಸಿದರೆ ಅದನ್ನು ಸೀಜ್ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಅಷ್ಟೇ ಅಲ್ಲದೆ, ದಂಡದ ಮೊತ್ತವನ್ನು 1,000 ದಿಂದ 5000ಕ್ಕೆ ಏರಿಕೆ ಮಾಡಲಾಗಿದೆ. ಫುಟ್ ಪಾತ್ ಪಾದಾಚಾರಿಗಳಿಗೆ ಓಡಾಡುವ ದಾರಿ ಅಲ್ಲಿ ವಾಹನಗಳನ್ನು ಚಲಾಯಿಸಲು ಅವಕಾಶ ಇಲ್ಲ ” ಎಂದರು.
ಮೊದಲ ಬಾರಿಗೆ ಕಾನೂನು ಉಲ್ಲಂಘನೆ ಮಾಡಿದರೆ 5,000 ರೂಪಾಯಿ ದಂಡ ಮತ್ತು ಎರಡನೇ ಬಾರಿ ಉಲ್ಲಂಘಿಸಿದರೆ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಮೂರನೇ ಬಾರಿ ಉಲ್ಲಂಘನೆ ಮಾಡಿದರೆ ವಾಹನವನ್ನೇ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು. ಈ ಸಂಬಂಧವೂ ಕಾನೂನು ರೂಪಿಸಲಾಗುತ್ತಿದ್ದು, ಸರ್ಕಾರದ ಅನುಮೋದನೆ ಪಡೆದು ಜಾರಿಗೆ ತರಲಾಗುತ್ತದೆ ಎಂದರು.
ಫುಟ್ ಪಾತ್ ನಲ್ಲಿ ವಾಹನ ಚಲಾಯಿಸಿದರೆ ಎಷ್ಟು ದಂಡ?
- ಮೊದಲ ಬಾರಿ ಕಾನೂನು ಉಲ್ಲಂಘಿಸಿದರೆ ₹ 5,000 ದಂಡ
- ಎರಡನೇ ಬಾರಿ ಕಾನೂನು ಉಲ್ಲಂಘಿಸಿದರೆ ₹10,000 ದಂಡ
- ಮೂರನೇ ಬಾರಿ ಉಲ್ಲಂಘಿಸಿದರೆ ವಾಹನ ಮುಟ್ಟುಗೋಲು
ಹಾಫ್ ಹೆಲ್ಮೆಟ್ ನಿಷೇಧ
ರಾಜ್ಯಾದ್ಯಂತ ಹಾಫ್ ಹೆಲ್ಮೆಟ್ ಸಂಪೂರ್ಣವಾಗಿ ಬ್ಯಾನ್ ಆಗಲಿದೆ. ಈ ಸಂಬಂಧಿಸಿದಂತೆ ಕಾನೂನು ಪರಿಶೀಲನೆ ಮಾಡಿ ಕಾಯ್ದೆ ರೂಪದಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಹ್ಯಾಪ್ ಹೆಲ್ಮೇಟ್ ಧರಿಸುವುದರಿಂದ ಸಾಕಷ್ಟು ಅವಘಡಗಳು ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಈ ನಿರ್ಧಾರಕ್ಕೆ ಬರಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಚಿವರು, “ಆಫ್ ಹೆಲ್ಮೆಟ್ ಫ್ಯಾಕ್ಟರಿಗಳನ್ನು ಬಂದ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಪಘಾತ ಪ್ರಕರಣಗಳಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ತಲೆಗೆ ಏಟು ಬಿದ್ದಿದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗುವುದು” ಎಂದರು.
- ಹಾಫ್ ಹೆಲ್ಮೇಟ್ ಸಂಬಂಧಿಸಿದ ಕಾನೂನು ರೂಪಿಸುವ ಪ್ರಕ್ರಿಯೆ ಶೀಘ್ರ ಜಾರಿ
- ಹೊಸ ವರ್ಷದ ವೇಳೆಗೆ ಸಂಪೂರ್ಣವಾಗಿ ಹಾಫ್ ಹೆಲ್ಮೆಟ್ ಬ್ಯಾನ್
- ಕಠಿಣ ಕಾನೂನು ಜಾರಿಗೆ ತರುವ ಮೂಲಕ ಹ್ಯಾಫ್ ಹೆಲ್ಮೆಟ್ ಧರಿಸುವುದಕ್ಕೆ ನಿಯಂತ್ರಣ

