ChatGPT Image Oct 3, 2026, 08_41_04 PM-modified
GREATER BENGALURU NEWS 9
Ola Uber

Greater Bengaluru News9 : ರಾಜ್ಯದ ಕ್ಯಾಬ್ ಪ್ರಯಾಣಿಕರು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಸಾರಿಗೆ ಇಲಾಖೆ ಮಹತ್ವದ ಅಪ್‌ಡೇಟ್ ನೀಡಿದೆ. ಓಲಾ (Ola), ಊಬರ್ (Uber) ಸೇರಿದಂತೆ ಆ್ಯಪ್ ಆಧಾರಿತ ಕ್ಯಾಬ್‌ಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ.

ಇದರ ಜೊತೆಗೆ ಹಾಫ್ ಹೆಲ್ಮೆಟ್ ನಿಷೇಧ ಹಾಗೂ ಫುಟ್‌ಪಾತ್‌ನಲ್ಲಿ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ. ಹೊಸ ವರ್ಷದಿಂದ ಈ ನಿಯಮಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಕ್ಯಾಬ್‌ಗಳು ಸಾರಿಗೆ ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮೀಟರ್ ಅಳವಡಿಸದ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿಯಮ ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಓಲಾ, ಊಬರ್ ಕ್ಯಾಬ್‌ಗಳಿಗೂ ಮೀಟರ್ ಕಡ್ಡಾಯ!
ನಗರದಲ್ಲಿ ಸಂಚರಿಸುವ ಓಲಾ, ಊಬರ್ ಕ್ಯಾಬ್‌ಗಳಿಗೆ ಮೀಟರ್ ಬೋರ್ಡ್ ಅಳವಡಿಸುವುದನ್ನು ಕಡ್ಡಾಯಗೊಳಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಆಟೋಗಳ ಮಾದರಿಯಲ್ಲಿಯೇ ಕ್ಯಾಬ್‌ಗಳಲ್ಲೂ ಮೀಟರ್ ವ್ಯವಸ್ಥೆ ಇರಬೇಕು ಎಂದು ಸಚಿವರು ತಿಳಿಸಿದ್ದಾರೆ. ಆ್ಯಪ್ ಮೂಲಕ ಪ್ರಯಾಣ ದರ ಸಂಗ್ರಹಿಸುವಂತಿಲ್ಲ ಎಂದು ಹೇಳಿರುವ ಸಚಿವರು, ಸಾರಿಗೆ ಇಲಾಖೆಯ ನಿಯಮಗಳನ್ನು ಎಲ್ಲ ಕ್ಯಾಬ್ ಚಾಲಕರು ಪಾಲಿಸಲೇಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಮೀಟರ್ ಅಳವಡಿಸದೆ ಸಂಚರಿಸುವ ಕ್ಯಾಬ್‌ಗಳನ್ನು ಸೀಜ್ ಮಾಡಲು ನಿಯಮ ರೂಪಿಸಲಾಗುತ್ತಿದೆ. ಈ ಸಂಬಂಧ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *